ದಂತ ಚಿಕತ್ಸೆಯಲ್ಲಿ ಹೊಸ ಹೆಜ್ಜೆ

ಹಲ್ಲೇ ಮುಖಕ್ಕೆ ಭೂಷಣ. “ದಾಳಿಂಬೆಯ ಬೀಜದಂತೆ’ ಎಂದು ಹೊಗಳುವುದು ಸುಂದರವಾದ ಕ್ರಮಬದ್ದವಾದ ಹಲ್ಲುಗಳನ್ನು ನೋಡಿಯೆ. ಸಾಮಾನ್ಯವಾಗಿ ಕೆಲವರಿಗೆ ಹುಳಕಲ್ಲಿನಿಂದ ಹಲ್ಲು ಕೆಟ್ಟು ಹೋಗಬಹುದು ಅಥವಾ ಸ್ವಚ್ಛತೆ ಕಾಪಾಡದಿದ್ದರೆ ಕೊಳತು ಹೋಗಬಹುದು. ಆಗ ರಾತ್ರಿ ಇಡೀ ನಿದ್ದೆ ಬಾರದೇ ನೋವಿನಿಂದ ಪರಿತಪಿಸಬಹುದು.
ಕಪೋಲಗಳು ಊದಿಕೊಂಡು ಮುಖದ ಮುದ್ರೆಯೇ ಅಸಹ್ಯವಾಗಬಹುದು. ಇದಕ್ಕೆಲ್ಲಮದ್ದು ಎಂದರೆ ಹಲ್ಲುಕೀಳಿಸು- ವುದು. ಆಗಲೂ ಸಹ ವಸಡುಗಳಿಗೆ ಚುಚ್ಚುಮದ್ದು ಹಾಕಿ ಮರಗಟ್ಟಸಿ ಹಲ್ಲನ್ನು ಕೀಳಬೇಕಾಗುತ್ತದೆ. ಏನೇ ಮರಗಟ್ಟದ್ದರೂ ಇದೊಂದು ಯಮ ಶಿಕ್ಷೆಯೆ. ಅದರಲ್ಲೂ ಬೇರುಗಟ್ಟಿ ಇದ್ದರೆ ಕೀಳುವುದು ಬಹಳ ಹೊತ್ತಾಗಬಹುದು.

ಆದರೆ ಇತ್ತೀಚಿಗೆ ದಂತವೈದ್ಯ ಚಿಕಿತ್ಸೆಯಲ್ಲಿ ಕ್ರಾಂತಿಕಾರಕ ಬದಲಾವಣೆಯಾಗಿದೆ. ನೋವಿನಿಂದ ಪರಿತಪಿಸುವ, ಮುಖ ಊದಿಸಿಕೊಳ್ಳುವ ಸಂದರ್ಭಕ್ಕೆ ತಿಲಾಂಜಲಿಯನ್ನು ಇತ್ತೀಚಿನ ವಿಜ್ಞಾನಿಗಳು ಇಟ್ಟಿದ್ದಾರೆ. ಲೇಸರ್ ತಂತ್ರ ವಿಧಾನದಿಂದ ಸರ್ಜರಿಯ ಅಗತ್ಯವಿಲ್ಲದೆ ಕಡಿಮೆ ಎಂದರೆ 40 ಸೆಕೆಂಡಿನಿಂದ 3 ನಿಮಿಷದೊಳಗಾಗಿಯೇ ಲೇಸರ್ ಚಿಕಿತ್ಸೆಯಿಂದ ಗುಣಪಡಿಸಬಹುದೆಂದು ಹೇಳುತ್ತಾರೆ. ದಂತಗಳ ಚಿಕಿತ್ಸೆಗ ಲೇಸರ್ ತಂತ್ರವಿಧಾನ ಬಳಸುವು
ದರಿಂದ ಸೂಕ್ಷ್ಮವಾದ ವಸಡುಗಳಿಗೆ ಯಾವುದೇ ಅಪಾಯವಾಗಲೀ, ಗಾಯವಾಗಲೀ, ಆಗದೇ ವಾಸ್ತವ ಸ್ಲಿತಿಯ-
ಲ್ಲಿದ್ದಂತೆ ಇರಬಹುದು. ಈ ಲೇಸರ್ ಕಿರಣವು ಹಲ್ಲುಗಳ ಒಳಗಡೆಯ ವರೆಗೆ ಹೋಗಿ ಯಾವುದೇ ದಂತ ರೋಗವನ್ನು ನಿರ್ಮೂಲನೆ ಮಾಡುವ ಶಕ್ತಿಯನ್ನು ಹೊಂದಿದೆ. ಸಬ್‌ಮ್ಯೂಕಸ್ ಫೈಫ್ರೋಸಿಸ್ ರೋಗವು ಹೆಚ್ಚಾಗಿ ಪಾನ್‌ಮಸಾಲ, ತಂಬಾಕು, ಸಿಗರೇಟು ಸೇವನೆ, ಶರಾಬು, ಅತಿಯಾಗಿ ಯಾವುದೇ ಪದಾರ್ಥವನ್ಪು ಅಗಿದರೆ ಬಾಯಿಯ ಮೃದುವಾದ
(ಮಾಂಸ)ವು ಮೂಲಕ ಒರಟಾಗಿ, ಬಾಯಿಬಿಡಲಾಗುವುದೇ ಇಲ್ಲ. ಅಗಿಯುಲಾಗುವುದಿಲ್ಲ. ಹಿಂದೆ ಅಪರೇಷನ್ ಮೂಲಕ ಮಾಡಿಸಿಕೊಂಡ ಚಿಕಿತ್ಸೆಗೆ ಆರು ತಿಂಗಳು ಸಮಯ ಹಿಡಿದರೆ ಈಗ ಈ ಲೇಸರ್ ಕಿರಣ ಚಿಕಿತ್ಸೆಯಿಂದ 15 ರಿಂದ 2 ತಿಂಗಳೊಳಗಾಗಿ ವಾಸಿಯಾಗುತ್ತದೆ. ಪೂರ್ತಿ ಚಿಕಿತ್ಸೆ ನೋವಿಲ್ಲದೇ ನಡೆಯುತ್ತದೆ ಇದರಂತೆ ಹಲ್ಲುಗಳಿಗೆ ತಣ್ಣನೆಯ ಅಥವಾ ಬಿಸಿ ಪದಾರ್ಥಗಳು ಸ್ಪರ್ಷಗೊಂಡಾಗ ಮೈ’ಝುಂ’ ಎಂದು ನೋವಾಗುವ ದಂತ ಚಿಕಿತ್ಸೆಯನ್ನು ಕೂಡ ಒಂದು ನಿಮಿಷದಲ್ಲಿ ಮಾಡಬಹುದು. ಹುಳಕಲ್ಲು ಆದರೆ “ರೊಟ್‌ಕೆನಾಲ್’ ಚಿಕಿತ್ಸೆಯ ಮೂಲಕ
ಸರಿಪಡಿಸಬಹುದು.
1) ವಸಡುಗಳಲ್ಲಿ ರಕ್ತ ಕೀವು ಬರುತ್ತಿದ್ದರೆ,
2) ಹಲ್ಲುಗಳು ಅಲ್ಲಾಡುತ್ತಿದ್ದರೆ,
3) ಹಲ್ಲುಗಳ ಸಮಾನಾಂತರ ಮೂಳೆ ಸಡಿಲವಾಗಿದ್ದರೆ,
4) ಬಾಯಿಯಲ್ಲಿ ಹುಣ್ಣುಗಳಾಗಿದ್ದರೆ,
5) ಬಾಯಿಯ ನರಗಳಲ್ಲಿ ಆಗುವ ಸೊಂಕಿನಿಂದ ಒಳಕೆನ್ನೆ, ಹಣೆ, ತುಟಿಗಳಿಗೆ ನೋವಾಗುತ್ತಿದ್ದರೆ,
6) ಬಾಯಿ ತೆರೆದಾಗ ಮತ್ತು ಮುಚ್ಚುವಾಗ ಶಬ್ದಬರುತ್ತಿದ್ದರೆ.

ಹೀಗೆ ಬಾಯಿ ಮತ್ತು ವಸಡು, ಹಲ್ಲುಗಳಿಗೆ ಅದ ಯಾವುದೇ ರೀತಿಯ ರೋಗವನ್ನು ನಿವಾರಿಸಲು ಲೇಸರ್‌ಕಿರಣ ಚಿಕಿತ್ಸೆ ತಂತ್ರ ಹೊಂದಿದ ವೈದ್ಯರು ಮೊದಲು ಹಲ್ಲುಗಳನ್ನು ಶುಭಗ್ರಗೊಳಿಸಿ ಆಯಾ ರೋಗಕೈ ತಕ್ಕಂತೆ ಲೇಸರ್ ಕಿರಣಗಳ ಪ್ರಯೋಗ ಮಾಡಿ ಗುಣಪಡಿಸುತ್ತಾರೆ. ಈ ಮೊದಲು ವಸಡಿನ ಆಪರೇಷನ್ ಅಥವಾ ಬಾಯಿ ಊದುವಿಕೆ,
ತಿಂಗಳುಗಟ್ಟಲೆ ನರಳುವಿಕೆ, ಸಾವಿರಾರು ರೂಪಾಯಿಗಳ ವ್ಯಯ ಈ ಯಾವ ಸಮಸ್ಯೆಗಳೂ ಇಲ್ಲದೆ ಲೇಸರ್ ತಂತ್ರವಿಧಾನದಿಂದ ನೋವಿಲ್ಲದೇ ದಂತ ರೋಗವನ್ನು ಪರಿಹರಿಸಿ ಕೊಳ್ಳಬಹುದು. ಲೇಸರ್ ಕಿರಣಗಳ ಪ್ರಭಾವವನ್ನು ಡಾ|| ಟೌನ್ಸ್ ತಿಳಿಸುತ್ತಾರೆ. ಈ ಅದ್ಭುತವಾದ ಲೇಸರ್ ಶಕ್ತಿಯನ್ನು 1958ರಲ್ಲಿ ಇವರು ಕಂಡು ಹಿಡಿದರೂ ದಂತ ವೈದ್ಯಕೀಯದಲ್ಲಿ ಇತ್ತೀಚಿಗೆ ಈ ಪ್ರಯೋಗಗಳಾಗುತ್ತಿರುವುದು ಭವಿಷ್ಯದ ದಂತ ರೋಗಿಗಳಿಗೆ
ಶುಭ ಸೂಚನೆಯಾಗಿದೆ.

*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹೊಸ ಚೆಲುವನು ಹರಸಿ
Next post ಯಕ್ಷಗಾನ ಶಿಕ್ಷಣ

ಸಣ್ಣ ಕತೆ

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ಹಳ್ಳಿ…

    ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

cheap jordans|wholesale air max|wholesale jordans|wholesale jewelry|wholesale jerseys